ಮಾರ್ಚ್
ಕೈಸ್ತ ವರ್ಷದ ಮೂರನೆಯ ತಿಂಗಳು. ಇದರಲ್ಲಿ ಮೂವತ್ತೊಂದು ದಿವಸಗಳಿವೆ. ರೋಮನ್ ದೊರೆಗಳ ಕಾಲದಲ್ಲಿ, ಅವನ ಆರಾಧ್ಯದೈವಗಳ ಪೈಕಿ ಒಂದಾ ಮಾರ್ಸ್‍ನ ಗೌರವಾರ್ಥ ಈ ತಿಂಗಳಿಗೆ ಮಾರ್ಚ್ ಎಂಬ ಹೆಸರು ಬಂತಲ್ಲದೆ ಆಗಿನ ವರ್ಷದ ಮೊದಲನೆಯ ತಿಂಗಳೂ ಆಗಿತ್ತು. 1725ರ ತನಕವೂ ಇಂಗ್ಲೆಂಡಿನಲ್ಲಿ ಇದು ವರ್ಷದ ಮೊದಲನೆಯ ತಿಂಗಳೆಂದೇ ಪರಿಗಣಿತವಾಗಿತ್ತು. ಅಲ್ಲಿಯ ತನಕವೂ ಅವರಿಗೆ ನ್ಯಾಯಿಕವರ್ಷ ಪ್ರಾರಂಭವಾಗುತ್ತಿದ್ದದ್ದು ಮಾರ್ಚ್ 25 ರಂದು. 

	ಸೂರ್ಯ ತನ್ನ ವಾರ್ಷಿಕ ಪರಿಭ್ರಮಣೆಯಲ್ಲಿ ಕ್ರಾಂತಿವೃತ್ತದ ಮೇಲೆ ಚಲಿಸುವಾಗ ಮಾರ್ಚ್ 21 ರಂದು ವಸಂತವಿಷವದ್ಬಿಂದುವಿಗೆ ಬಂದಿರುತ್ತದೆ. ಅಂದು ಹಗಲು ಇರುಳುಗಳ ಅವಧಿ ಸಮ. ನಿಜವಾದ (ಅಂದರೆ ಖಗೋಳವಿಜ್ಞಾನ ಪ್ರಕಾರ) ಯುಗಾದಿ ಮಾರ್ಚ್ 22 ರಂದು ಆಗಬೇಕು. ಆದರೆ ಸಂಪ್ರದಾಯ ಇನ್ನೂ ಈ ಸುಧಾರಣೆಯನ್ನು ಅಳವಡಿಸಿಕೊಂಡಿಲ್ಲ.

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ